<strong>объединенные королевства</strong>

Соединенное Королевство Великобритании и Северной Ирландии

Великобритания национальный восход

ಗೌಪ್ಯತೆ ಮತ್ತು ಸೇನಾ ಕಾರ್ಯರೂಪ

Размер территории Великобритании:

ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯವು ಹೊಸದಾಗಿ ಸ್ಥಾಪಿತವಾದ ಒಂದು ಪೌರ ವಿಶ್ವವಿದ್ಯಾಲಯವಾಗಿದೆ.

ಯುನೈಟೆಡ್‌ ಕಿಂಗ್‌ಡಂನ ಪ್ರತಿ ದೇಶವೂ ತನ್ನದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವುದರೊಂದಿಗೆ ಶಿಕ್ಷಣದ ಮೇಲಿನ ಅಧಿಕಾರವನ್ನು ಉತ್ತರ ಐರ್ಲೆಂಡ್‌, ಸ್ಕಾಟ್ಲೆಂಡ್‌‌ ಮತ್ತು ವೇಲ್ಸ್‌ಗಳಿಗೆ ವಿಕೇಂದ್ರೀಕರಿಸಲಾಗಿದೆ.

ವೇಲ್ಸ್‌ನಲ್ಲಿ ಶಿಕ್ಷಣದ ಜವಾಬ್ದಾರಿಯನ್ನು ವೇಲ್ಸ್‌ನ ರಾಷ್ಟ್ರೀಯ ಶಾಸನ ಸಭೆ ಹೊತ್ತಿದೆ. ಹೆಚ್ಚಿನ ವೆಲ್ಶ್‌ ವಿದ್ಯಾರ್ಥಿಗಳಿಗೆ ಪೂರ್ಣವಾಗಿ ಇಲ್ಲವೇ ಹೆಚ್ಚಿನ ಪ್ರಮಾಣದಲ್ಲಿ ವೆಲ್ಶ್ ಭಾಷೆಯಲ್ಲಿ ಬೋಧಿಸಲಾಗುತ್ತದೆ. 16 ವಯೋಮಾನದ ಎಲ್ಲ ವಿದ್ಯಾರ್ಥಿಗಳಿಗೆ ವೆಲ್ಶ್‌ ಭಾಷೆಯಲ್ಲಿ ಬೋಧನೆ ಕಡ್ಡಾಯವಾಗಿವೆ. ಪೂರ್ಣ ದ್ವಿಭಾಷೀ ವೇಲ್ಸ್‌ನ್ನು ಹೊಂದುವ ಕಾರ್ಯನೀತಿಯ ಅಂಗವಾಗಿ ವೆಲ್ಶ್‌ ಮಾಧ್ಯಮದ ಶಾಲೆಗಳನ್ನು ಹೆಚ್ಚಿಸುವ ಯೋಜನೆಗಳು ಪ್ರಸ್ತಾಪದಲ್ಲಿವೆ.

ನಾರ್‌ಫೋಕ್‌ ಮತ್ತು ನಾರ್ವಿಚ್‌ ವಿಶ್ವವಿದ್ಯಾಲಯದ ಆಸ್ಪತ್ರೆ-ಒಂದು ಆಧುನಿಕ NHS ಆಸ್ಪತ್ರೆ.

ದಿ ರಾಯಲ್ ಅಬರ್ದೀನ್ ಮಕ್ಕಳ ಆಸ್ಪತ್ರೆಯು ಮಕ್ಕಳಿಗೆ ಸಂಬಂಧಿಸಿದ ವಿಶೇಷಜ್ಞ ಆಸ್ಪತ್ರೆಯಾಗಿದ್ದು, NHS ಸ್ಕಾಟ್ಲೆಂಡ್‌ನ ಒಂದು ಭಾಗವಾಗಿದೆ.

ಉತ್ತರ ಐರ್ಲೆಂಡ್‌ನಲ್ಲಿ ಆರೋಗ್ಯ ರಕ್ಷಣೆಯನ್ನು ಪ್ರಧಾನವಾಗಿ ಆರೋಗ್ಯ, ಸಾಮಾಜಿಕ ಸೇವೆ ಮತ್ತು ಸಾರ್ವಜನಿಕ ಭದ್ರತಾ ಇಲಾಖೆ ನೀಡುತ್ತಿದೆ.

ಸ್ಕಾಟ್ಲೆಂಡ್‌ನಲ್ಲಿನ ದಿ ಫೋರ್ತ್‌ ರೈಲ್ವೆ ಬ್ರಿಜ್‌, ರೈಲು ಜಾಲದ ಒಂದು ಮಾದರಿ ಸ್ವರೂಪವಾಗಿದೆ.

UKಯುದ್ದಕ್ಕೂ ಉಪ ರಸ್ತೆ ಜಾಲಗಳಿರುವ46,904 kilometres (29,145 mi) ಮುಖ್ಯ ರಸ್ತೆಗಳಿದ್ದು, ಇವು ಮೋಟಾರ್‌ ರಸ್ತೆ ಜಾಲವನ್ನು ಹೊಂದಿದೆ.3,497 kilometres (2,173 mi) ಇಲ್ಲಿ 213,750 kilometres (132,818 mi)ನೆಲೆಗಟ್ಟಿನ ರಸ್ತೆಗಳೂ ಇವೆ.

ಬ್ರಿಟೀಷ್‌ ಕ್ರೀಡೆಯನ್ನು ಆಗಿಂದಾಗ್ಗೆ ರಾಷ್ಟ್ರಗಳ ಆಧಾರದಲ್ಲಿ ಇಂಗ್ಲೀಷ್‌, ಸ್ಕಾಟಿಷ್‌‌, ವೆಲ್ಶ್‌ ಮತ್ತು ಉತ್ತರ ಐರಿಷ್‌ ಮತ್ತು/ಅಥವಾ ಐರಿಷ್‌ ಸಂಸ್ಥೆಗಳು ಎಂದು ವಿಭಾಗಿಸಲಾಗುತ್ತದೆ.

ಅಂತರ‌ರಾಷ್ಟ್ರೀಯ ಸ್ಪರ್ಧೆಗಳ ಸಾಂಘಿಕ ಕ್ರೀಡೆಗಳು ಮತ್ತು ಕಾಮನ್‌ವೆಲ್ತ್‌ ಕ್ರೀಡೆಗಳಲ್ಲಿ ಇಂಗ್ಲೆಂಡ್‌, ಸ್ಕಾಟ್ಲೆಂಡ್‌‌, ವೇಲ್ಸ್‌ ಮತ್ತು ಉತ್ತರ ಐರ್ಲೆಂಡ್‌‌ಗಳನ್ನು ಪ್ರತ್ಯೇಕ ತಂಡಗಳು ಪ್ರತಿನಿಧಿಸುತ್ತವೆ. (ಕ್ರೀಡಾ ಸಂದರ್ಭಗಳಲ್ಲಿ, ಈ ತಂಡಗಳನ್ನು ಸಾಮೂಹಿಕವಾಗಿ ಸ್ಥಳೀಯ ರಾಷ್ಟ್ರಗಳುಎಂಬಂತೆ ಹೆಸರಿಸಬಹುದು.) ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಒಂದೇ ತಂಡ ಯುನೈಟೆಡ್‌ ಕಿಂಗ್‌ಡಂ ಅನ್ನು ಪ್ರತಿನಿಧಿಸುತ್ತದೆ, ಒಲಿಂಪಿಕ್ಸ್ ನಲ್ಲಿ ಗ್ರೇಟ್‌ ಬ್ರಿಟನ್‌ ತಂಡ UKಯನ್ನು ಪ್ರತಿನಿಧಿಸುತ್ತದೆ.

ಗ್ಲಾಸ್ಗೋದ ಹ್ಯಾಂಪ್‌ಡೆನ್‌ ಪಾರ್ಕ್‌-ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಫುಟ್‌ಬಾಲ್‌ ಕ್ರೀಡಾಂಗಣ

ಕಾರ್ಡಿಫ್‌ನ ಮಿಲೆನಿಯಂ ಕ್ರೀಡಾಂಗಣ, ವೇಲ್ಸ್‌ನ ರಾಷ್ಟ್ರೀಯ ಕ್ರೀಡಾಂಗಣ

ಸ್ಥಳೀಯ ರಾಷ್ಟ್ರಗಳ ಪೈಕಿ ಪ್ರತಿಯೊಂದು ತಮ್ಮದೇ ಆದ ಫುಟ್‌ಬಾಲ್‌ ಅಸೋಸಿಯೇಷನ್‌, ರಾಷ್ಟ್ರೀಯ ತಂಡ ಮತ್ತು ಲೀಗ್‌ ವ್ಯವಸ್ಥೆಯನ್ನು ಹೊಂದಿವೆ. ಆದರೂ ಕೆಲವು ಕ್ಲಬ್‌ಗಳು ವ್ಯವಸ್ಥಾಪನೆ ಮತ್ತು ಐತಿಹಾಸಿಕ ಕಾರಣಗಳಿಂದಾಗಿ ತಮ್ಮ ದೇಶದ ವ್ಯವಸ್ಥೆಗಳಿಂದ ಹೊರಗಡೆ ಆಡುತ್ತಿವೆ.

90,000-ಸಾಮರ್ಥ್ಯ ಹೊಂದಿರುವ ವೆಂಬ್ಲೆ ಸ್ಟೇಡಿಯಂ ಇಂಗ್ಲೆಂಡ್‌ನ ಪ್ರಮುಖ ಕ್ರೀಡಾಂಗಣ.

ಸ್ಕಾಟಿಷ್‌ ಫುಟ್‌ಬಾಲ್‌ ಲೀಗ್‌ ವ್ಯವಸ್ಥೆಯಲ್ಲಿ ಎರಡು ರಾಷ್ಟ್ರೀಯ ಲೀಗ್‌ಗಳಿವೆ; ಉನ್ನತ ವಿಭಾಗವಾಗಿರುವಸ್ಕಾಟಿಷ್ ಪ್ರೀಮಿಯರ್‌ ಲೀಗ್‌, ಮತ್ತು ಸ್ಕಾಟಿಷ್ ಫುಟ್‌ಬಾಲ್‌ ಲೀಗ್ ಮೂರು ವಿಭಾಗಳನ್ನು ಹೊಂದಿದೆ. ಇದರ ಕೆಳಗೆ, ರಾಷ್ಟ್ರೀಯ ಲೀಗ್‌ಗಳ ಜೊತೆ ಸಂಪರ್ಕವಿಲ್ಲದ ಮೂರು ಪ್ರಾದೇಶಿಕ ಲೀಗ್‌ಗಳಿವೆ; ಹೈಲ್ಯಾಂಡ್‌ ಫುಟ್‌ಬಾಲ್‌ ಲೀಗ್‌, ಈಸ್ಟ್‌ ಆಫ್‌ ಫುಟ್‌ಬಾಲ್‌ ಲೀಗ್‌ ಮತ್ತು ಸೌತ್‌ ಆಫ್‌ ಸ್ಕಾಟ್ಲೆಂಡ್‌‌ ಫುಟ್‌ಬಾಲ್‌ ಲೀಗ್‌. ಬೆರ್‌ವಿಕ್‌ ರೇಂಜರ್ಸ್‌ ಎಂಬ ಒಂದು ಇಂಗ್ಲೀಷ್‌ ಕ್ಲಬ್‌ ಸ್ಕಾಟಿಷ್‌ ವ್ಯವಸ್ಥೆಯಲ್ಲಿ ಆಡುತ್ತದೆ. ಹಳೆಯ ತಂಡಗಳಾದ ಸೆಲ್ಟಿಕ್‌ ಮತ್ತು ರೇಂಜರ್ಸ್‌‌ ಎಂಬ ಎರಡು ವಿಶ್ವಪ್ರಸಿದ್ಧ ಫುಟ್‌ಬಾಲ್ ಕ್ಲಬ್‌ಗಳಿಗೆ ಸ್ಕಾಟ್ಲೆಂಡ್‌ ಮನೆಯಾಗಿದೆ. ಯೂರೋಪಿಯನ್‌ ಸ್ಪರ್ಧೆಗಳಲ್ಲಿ ಜಯಗಳಿಸುತ್ತಾ ಬಂದ ತಂಡಗಳ ಪೈಕಿ ಸೆಲ್ಟಿಕ್ (1967ರ ಯೂರೋಪಿಯನ್‌ ಕಪ್‌), ರೇಂಜರ್ಸ್‌‌ (1972ರ ಯೂರೋಪಿಯನ್‌ ಕಪ್‌ ವಿಜೇತರ ಕಪ್‌) ಮತ್ತು ಅಬೆರ್‌ದೀನ್‌(ಯೂರೋಪಿಯನ್‌ ಕಪ್‌ ವಿಜೇತರ ಕಪ್‌ ಮತ್ತು 1983ರ ಯೂರೋಪಿಯನ್ ಸೂಪರ್‌ ಕಪ್‌)ಸ್ಕಾಟಿಷ್‌ ತಂಡಗಳು ಸೇರಿವೆ. ಸೆಲ್ಟಿಕ್‌ ತಂಡ ಯುರೋಪಿಯನ್‌ ಕಪ್‌ ಗೆದ್ದ ಮೊದಲ ಬ್ರಿಟೀಷ್‌ ಕ್ಲಬ್‌ ಆಗಿದೆ.

ವೆಲ್ಶ್‌ ಫುಟ್‌ಬಾಲ್‌ ಲೀಗ್‌‌ ವ್ಯವಸ್ಥೆಯು, ವೆಲ್ಶ್‌ ಪ್ರೀಮಿಯರ್‌ ಲೀಗ್‌ ಮತ್ತು ಪ್ರಾದೇಶಿಕ ಲೀಗ್‌ಗಳನ್ನು ಒಳಗೊಂಡಿದೆ. ವೆಲ್ಶ್‌ ಪ್ರೀಮಿಯರ್‌ ಕ್ಲಬ್‌ನ , ದಿ ನ್ಯೂ ಸೇಂಟ್ಸ್‌ಗಳು ತಮ್ಮ ದೇಶೀಯ ಪಂದ್ಯಗಳನ್ನು ಓಸ್‌ವೆಸ್ಟ್ರಿಯ ಗಡಿಯಲ್ಲಿ ಇಂಗ್ಲೀಷ್‌ ತಂಡದ ಜೊತೆ ಸೇರಿಕೊಂಡು ಆಡುತ್ತಾರೆ. ಕಾರ್ಡಿಫ್‌ ನಗರ F.C.ಯ ವೆಲ್ಶ್‌ ಕ್ಲಬ್‌ಗಳಾದ, ಕೋಲ್‌ವಿನ್‌ ಬೇ F.C., ಮೇರ್‌ಥಿರ್‌ ಟೈಡ್‌ಫಿಲ್‌ F.C., ನ್ಯೂಪೋರ್ಟ್‌ ಕೌಂಟಿ A.F.C., ಸ್ವಾನ್‌ಸೀ ನಗರ A.F.C. ಮತ್ತು ರೆಕ್ಸ್‌ಹ್ಯಾಮ್‌ F.C.ತಂಡಗಳು ಇಂಗ್ಲೀಷ್‌ ವ್ಯವಸ್ಥೆಯಲ್ಲಿ ಆಡುತ್ತವೆ. 76,250 ಆಸನಗಳಿರುವ ಕಾರ್ಡಿಫ್‌ ನಗರದ ಮಿಲ್ಲೇನಿಯಮ್‌‌ ಸ್ಟೇಡಿಯಂ ವೇಲ್ಸ್‌‌ನ ಪ್ರಮುಖ ಕ್ರೀಡಾಂಗಣವಾಗಿದೆ.

ಉತ್ತರ ಐರ್ಲೆಂಡ್ ಫುಟ್‌ಬಾಲ್ ಲೀಗ್‌ ವ್ಯವಸ್ಥೆ‌ಯು IFA ಪ್ರೀಮಿಯರ್‌ ಶಿಪ್‌ ಅನ್ನು ಒಳಗೊಂಡಿದೆ. ಡೆರ್ರಿ ಸಿಟಿ ಎಂಬ ಒಂದು ಉತ್ತರ ಐರಿಷ್‌ ಕ್ಲಬ್‌ UKಯ ಹೊರಭಾಗದಲ್ಲಿ ಅಂದರೆ ರಿಪಬ್ಲಿಕ್‌ ಆಫ್‌ ಐರ್ಲೆಂಡ್‌ ಫುಟ್‌ಬಾಲ್‌ ಲೀಗ್‌ ವ್ಯವಸ್ಥೆ‌ಯಲ್ಲಿ ಆಡುತ್ತದೆ.

ರಗ್ಬಿ ಲೀಗ್‌ಅನ್ನು UKಯಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ಆಟವಾಗಿ ಆಡಲಾಗುತ್ತಿದೆ. ಆದರೆ ಉತ್ತರ ಇಂಗ್ಲೆಂಡ್‌ನ ಹಲವು ಪ್ರದೇಶಗಳಲ್ಲಿ ವಿಶೇಷವಾಗಿ ಯಾರ್ಕ್‌ಷೈರ್‌, ಕುಂಬ್ರಿಯ ಮತ್ತು ಲ್ಯಾಂಕಷೈರ್‌ ನಗರಗಳ ವಿಗನ್‌ ಮತ್ತು ಸೇಂಟ್‌ ಹೆಲೆನ್ಸ್‌‌ ಪಟ್ಟಣಗಳಲ್ಲಿ ಇದು ಪ್ರಮುಖ ಆಟವಾಗಿದೆ. ಇದು ಲಂಡನ್‌ ಮತ್ತು ದಕ್ಷಿಣ ವೇಲ್ಸ್‌ನಲ್ಲೂ ಸಾಕಷ್ಟು ಅಸ್ತಿತ್ವ ಹೊಂದಿದೆ.

ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಮತ್ತು ಫ್ರಾನ್ಸ್ ವಿರುದ್ಧದ ಆಶಸ್‌ ಸರಣಿ ಪ್ರವಾಸಕ್ಕಾಗಿ ಗ್ರೇಟ್‌ ಬ್ರಿಟನ್‌ ತಂಡವನ್ನು ಈಗಲೂ ಪೂರ್ಣ ಪ್ರಮಾಣದ ರಾಷ್ಟ್ರೀಯ ತಂಡವನ್ನಾಗಿಯೇ ಉಳಿಸಿಕೊಳ್ಳಲಾಗಿದೆ.

ಇಂಗ್ಲೆಂಡ್‌, ಸ್ಕಾಟ್‌ಲೆಂಡ್, ವೇಲ್ಸ್‌ ಮತ್ತು ಐರ್ಲೆಂಡ್‌ ದೇಶಗಳಿಗೆ ಪ್ರತ್ಯೇಕ ತಂಡ ಎಂಬ ಆಧಾರದ ಮೇಲೆ ರಗ್ಬಿ ಯೂನಿಯನ್‌ ಅನ್ನು ವ್ಯವಸ್ಥೆಗೊಳಿಸಲಾಗಿದ್ದು, ಪ್ರತಿಯೊಂದೂ ತಂಡ ತಮ್ಮದೇ ಲೀಗ್ ವ್ಯವಸ್ಥೆಯನ್ನು ಹೊಂದಿವೆ, ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನ ಪಡೆದಿವೆ.

ರಗ್ಬಿ ಯೂನಿಯನ್‌ಅನ್ನು UKಯ ಕೆಲವಡೆ ಮಾತ್ರ ಆಡಲಾಗುತ್ತಿದೆ, ದೊಡ್ಡ ಪ್ರಮಾಣದಲ್ಲಿ ಆಡಲಾಗುತ್ತಿಲ್ಲ. ಆದರೆ ದಕ್ಷಿಣ ವೇಲ್ಸ್‌, ಸ್ಕಾಟಿಷ್‌ ಗಡಿಗಳು‌, ಇಂಗ್ಲೀಷ್‌ ವೆಸ್ಟ್‌ ಕಂಟ್ರಿ ಮುಂತಾದ ಕಡೆ ಇದನ್ನು ಪ್ರಮುಖ ಆಟವನ್ನಾಗಿ ಆಡಲಾಗುತ್ತಿದೆ.ಉತ್ತರ ಐರ್ಲೆಂಡ್‌ (ಸಮಸ್ತ-ಐರ್ಲೆಂಡ್‌ ಎಂಬ ತತ್ವದ ಆಧಾರದ ಮೇಲೆ RU ವ್ಯವಸ್ಥಿತಗೊಂಡಿದೆ.), ಎಡಿನ್‌ಬರ್ಗ್‌, ಲೀಸೆಸ್ಟರ್‌ ಮುಂತಾದ ಕಡೆಗಳಲ್ಲೂ ಇದು ಸಾಕಷ್ಟು ಅಸ್ತಿತ್ವವನ್ನು ಹೊಂದಿದೆ.

2003ರಲ್ಲಿ ಇಂಗ್ಲೆಂಡ್, ರಗ್ಬಿ ಯೂನಿಯನ್‌ ವಿಶ್ವ ಕಪ್‌ ಗೆದ್ದಾಗ, ವೇಲ್ಸ್‌ ಮೂರನೇ ಸ್ಥಾನ ಮತ್ತು ಸ್ಕಾಟ್ಲೆಂಡ್ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ತಂಡಗಳಾಗಿ ಹೊರಹೊಮ್ಮಿದ್ದವು. ಐರ್ಲೆಂಡ್‌ತಂಡಕ್ಕೆ ಕ್ಟಾರ್ಟರ್‌ ಪೈನಲ್‌ ಪಂದ್ಯದಿಂದ ಮುಂದೆ ಹೋಗಲಾಗಲಿಲ್ಲ.

Больше проверок:  Федеральный государственный контроль (надзор) в сфере образования

ಗ್ರಾಂಡ್‌ ಸ್ಲಾಮ್‌ ಪಂದ್ಯಾವಳಿಯಾಗಿರುವ ವಿಂಬಲ್ಡನ್‌ ಚಾಂಪಿಯನ್‌ಷಿಪ್ಸ್‌‌ನ್ನು ಲಂಡನ್‌ನ ವಿಂಬಲ್ಡನ್‌ನಲ್ಲಿ ಪ್ರತಿ ಜೂನ್‌/ಜುಲೈನಲ್ಲಿ ನಡೆಸಲಾಗುತ್ತದೆ.

ಸೇಂಟ್‌ ಆಂಡ್ರ್ಯೂಸ್‌ನ ಭವ್ಯ ಮತ್ತು ಪುರಾತನ ಗಾಲ್ಫ್‌ ಕ್ಲಬ್‌, ವಿಶ್ವದ "ಗಾಲ್ಫ್‌ ನೆಲೆ" ಎಂದು ವ್ಯಾಪಕಕವಾಗಿ ಗುರುತಿಸಲ್ಪಟ್ಟಿದೆ.

ಹಲವು ಕ್ರೀಡೆಗಳ ಜನ್ಮ ಸ್ಥಳವಾದ UK, ಸ್ನೂಕರ್‌ ಕ್ರೀಡೆಗೂ ತವರು ಮನೆ. ಸ್ನೂಕರ್ ವಿಶ್ವದಾದ್ಯಂತ ಜನಪ್ರಿಯವಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ಚೀನಾದಲ್ಲಿ ಬೃಹತ್‌ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಸ್ನೂಕರ್ ‌ನ ವಿಶ್ವ ಚಾಂಪಿಯನ್‌ಷಿಪ್‌ ಪಂದ್ಯಾವಳಿಗಳು ವಾರ್ಷಿಕವಾಗಿ ಷೆಫ್ಫೀಲ್ಡ್‌ನಲ್ಲಿ ನಡೆಯುತ್ತವೆ.

ಟೆನ್ನಿಸ್‌ ಆಟ ಮೊದಲು 1859 ಮತ್ತು 1865ರ ನಡುವೆ ಬರ್ಮಿಂಗ್‌ಹ್ಯಾಮ್‌ ನಗರದಲ್ಲಿ ಜನ್ಮ ತಳೆಯಿತು. ವಿಂಬಲ್ಡನ್‌ ಚಾಂಪಿಯನ್‌ಷಿಪ್‌ಗಳುಅಂತರರಾಷ್ಟ್ರೀಯ ಟೆನ್ನಿಸ್‌ ಪಂದ್ಯಾವಳಿಗಳಾಗಿದ್ದು, ಲಂಡನ್‌ನ ವಿಂಬಲ್ಡನ್‌ನಲ್ಲಿ ಪ್ರತಿ ಬೇಸಿಗೆಯಲ್ಲಿ ನಡೆಯುತ್ತವೆ. ಇವು ಜಾಗತಿಕ ಟೆನ್ನಿಸ್‌ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪ್ರತಿಷ್ಠಿತ ಪಂದ್ಯಾವಳಿಗಳಾಗಿವೆ.

ಇಂಗ್ಲೆಂಡ್‌ನ ಚಾರ್ಲ್ಸ್ II, ಇವರ ಅವಧಿಯಲ್ಲಿ "ರಾಜರ ಆಟ"ವಾಗಿ ಜನ್ಮ ತಳೆದ ಥರೋಗ್‌ಬ್ರೆಡ್‌ ರೇಸಿಂಗ್‌(ಕುದುರು ರೇಸಿಂಗ್) UKಯಾದ್ಯಂತ ಜನಪ್ರಿಯವಾಗಿದೆ. ವಿಶ್ವ ಪ್ರಸಿದ್ಧ ರೇಸ್‌ಗಳಾದ ಗ್ರ್ಯಾಂಡ್ ನ್ಯಾಷನಲ್‌, ಎಪ್ಸಂ ಡರ್ಬಿ ಮತ್ತು ರಾಯಲ್‌ ಆಸ್ಕಾಟ್‌ಗಳು ಇಲ್ಲಿ ನಡೆಯುತ್ತವೆ. 0}ನ್ಯೂಮಾರ್ಕೆಟ್‌ ಪಟ್ಟಣವನ್ನು ಇಂಗ್ಲೀಷ್‌ ರೇಸಿಂಗ್‌ನ ಕೇಂದ್ರವೆಂದು ಪರಿಗಣಿಸಲಾಗಿದೆ, ಪ್ರಸಿದ್ಧ ನ್ಯೂ ಮಾರ್ಕೆಟ್‌ ರೇಸ್‌ಕೋರ್ಸ್‌ ಇಲ್ಲಿರುವುದು ಬಹುಮಟ್ಟಿಗೆ ಕಾರಣ.

ಅಂತರ‌ರಾಷ್ಟ್ರೀಯ ರೋವಿಂಗ್ ಕ್ರೀಡೆಯಲ್ಲೂ UK ತನ್ನ ಸಾಮಾರ್ಥ್ಯವನ್ನು ಸಾಬೀತುಪಡಿಸಿದೆ. ಸ್ಟೀವ್‌ ರೆಡ್‌ಗ್ರೇವ್‌ ಅವರನ್ನು ಹೆಚ್ಚು ಯಶಸ್ಸು ಪಡೆದ ರೋವರ್‌ ಎಂದು ವಿಸ್ತೃತವಾಗಿ ಪರಿಗಣಿಸಲಾಗಿದೆ. ಸ್ವೀವ್ ಅವರು ಒಲಿಂಪಿಕ್‌ ಕ್ರೀಡೆಗಳಲ್ಲಿ ಸತತ ಐದು ಬಾರಿ ಐದು ಚಿನ್ನದ ಪದಕಗಳು ಮತ್ತು ಒಂದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ವಿಶ್ವ ರೋವಿಂಗ್ ಚಾಂಪಿಯನ್‌ ಷಿಪ್‌‌ಮತ್ತು ಹೆನ್‌‌ಲೆ ರಾಯಲ್‌ ರೆಗಟ್ಟಾಗಳಲ್ಲಿ ಅಸಂಖ್ಯ ಜಯಗಳನ್ನು ದಾಖಲಿಸಿದ್ದಾರೆ.

ಉತ್ತರ ಐರ್ಲೆಂಡ್‌ನಲ್ಲಿ ಗ್ಯಾಲಿಕ್‌ ಫುಟ್‌ಬಾಲ್‌ ಮತ್ತು ಹರ್ಲಿಂಗ್‌ಗಳು ಭಾಗವಹಿಸುವಿಕೆ ಮತ್ತು ವೀಕ್ಷಕರ ದೃಷ್ಟಿಯಿಂದ ಜನಪ್ರಿಯ ಸಾಂಘಿಕ ಕ್ರೀಡೆಗಳಾಗಿವೆ. ವಲಸಿಗ ಐರಿಷ್‌ಗಳು ಕೂಡ UKಯಾದ್ಯಂತ ಈ ಆಟಗಳನ್ನು ಆಡುತ್ತಾರೆ.

ಮೋಟಾರ್‌ ಸ್ಪೋರ್ಟ್‌ನೊಂದಿಗೆ UK ತೀರ ಹತ್ತಿರವಾದ ಸಂಬಂಧವನ್ನು ಹೊಂದಿದೆ. ಫಾರ್ಮುಲಾ ಒನ್‌ ರೇಸಿಂಗ್‌ನ ಹಲವು ತಂಡಗಳು ಮತ್ತು ರೇಸಿಂಗ್‌ ಚಾಲಕರು UK ಮೂಲದವರಾಗಿದ್ದು, ಬ್ರಿಟನ್‌ನ ರೇಸಿಂಗ್‌ ಕಾರು ಚಾಲಕರು ಬೇರೆಲ್ಲ ದೇಶದ ಚಾಲಕರಿಗಿಂತ ಹೆಚ್ಚು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. F1 ರೇಸಿಂಗ್ ನ ವಿವಿಧ ಹಂತಗಳು ಮತ್ತು ವಿಶ್ವ ರ್ಯಾಲಿ ಚಾಂಪಿಯನ್‌ಷಿಪ್‌ಗಳಿಗೆ UK ಆತಿಥ್ಯ ವಹಿಸುತ್ತದೆ, ಮತ್ತು ಬ್ರಿಟೀಷ್‌ ಟೂರಿಂಗ್‌ ಕಾರ್ ಚಾಂಪಿಯನ್‌ಷಿಪ್‌(BTCC) ಎಂಬ ತನ್ನದೇ ಸ್ವಂತ ಟೂರಿಂಗ್‌ ಕಾರ್‌ ರೇಸಿಂಗ್ ಚಾಂಪಿಯನ್‌ಷಿಪ್‌ ಅನ್ನೂ ಹೊಂದಿದೆ. ಸಿಲ್ವರ್‌ಸ್ಟೋನ್‌ನಲ್ಲಿ ಪ್ರತಿ ಜುಲೈ ತಿಂಗಳಲ್ಲಿ ಬ್ರಿಟಿಷ್‌ ಗ್ರ್ಯಾಂಡ್‌ ಪ್ರಿಕ್ಸ್ ನಡೆಯುತ್ತದೆ.

ಬ್ರಿಟಿಷ್‌ ಸಂಸ್ಕೃತಿ ಎಂದೇ ಜನಜನಿತವಾಗಿರುವ ಯುನೈಟೆಡ್ ಕಿಂಗ್‌ಡಂನ ಸಂಸ್ಕೃತಿಯನ್ನು ಅದರ ಇತಿಹಾಸದಲ್ಲಿ ಬಿಂಬಿತವಾಗಿರುವಂತೆ ವಿವರಿಸಬಹುದು. ಅಭಿವೃದ್ಧಿ ಹೊಂದಿದ ಒಂದು ದ್ವೀಪದೇಶವಾಗಿ, ಬೃಹತ್ ಶಕ್ತಿಯಾಗಿ ಹಾಗೂ ನಾಲ್ಕು ದೇಶಗಳ ರಾಜಕೀಯ ಒಕ್ಕೂಟವಾಗಿಯೂ ಯುನೈಟೆಡ್ ಕಿಂಗ್‌ಡಂ ಇತಿಹಾಸದಲ್ಲಿ ವಿವರಿಸಲ್ಪಟ್ಟಿದೆ. ಇವುಗಳಲ್ಲಿ ಪ್ರತಿಯೊಂದು ದೇಶವೂ ತಂತಮ್ಮ ವಿಭಿನ್ನ ಸಂಪ್ರದಾಯಗಳು, ಪದ್ಧತಿಗಳು ಹಾಗೂ ಸಂಕೇತಗಳ ಅಂಶಗಳನ್ನು ಕಾಪಾಡಿಕೊಂಡು ಬರುತ್ತಿರುವುದು ಇಲ್ಲಿ ದಾಖಲಾಗಿದೆ. ಬ್ರಿಟಿಷ್‌ ಚಕ್ರಾಧಿಪತ್ಯದ ಪರಿಣಾಮವಾಗಿ, ಕೆನಡಾ, ಆಸ್ಟ್ರೇಲಿಯಾ, ಭಾರತ ಮತ್ತು ಸಂಯುಕ್ತ ಸಂಸ್ಥಾನಗಳಂತಹ ಇದರ ಹಿಂದಿನ ಬಹಳಷ್ಟು ವಸಾಹತುಗಳ ಭಾಷೆ, ಸಂಸ್ಕೃತಿ ಹಾಗೂ ಕಾನೂನು ವ್ಯವಸ್ಥೆಗಳಲ್ಲಿ ಬ್ರಿಟಿಷ್‌ ಪ್ರಭಾವವನ್ನು ಕಾಣಬಹುದು.

ಇಲ್ಲಿನ ಈಲಿಂಗ್ ಸ್ಟುಡಿಯೋಸ್, ವಿಶ್ವದಲ್ಲಿನ ಅತ್ಯಂಯ ಹಳೆಯ ಸ್ಟುಡಿಯೋ ಆಗಿದೆ ಎಂಬ ಪ್ರತಿಪಾದನೆಯೊಂದಿಗೆ, ಯುನೈಟೆಡ್ ಕಿಂಗ್‌ಡಂ ಚಲನಚಿತ್ರಗಳ ಅಭಿವೃದ್ಧಿಯಲ್ಲಿ ಪ್ರಭಾವಶಾಲಿಯಾಗಿ ನಡೆದುಕೊಂಡುಬಂದಿದೆ. ಪ್ರಮುಖ ಮತ್ತು ಯಶಸ್ವೀ ಚಲನಚಿತ್ರಗಳನ್ನು ನಿರ್ಮಿಸಿರುವ ಇತಿಹಾಸವನ್ನು ಹೊಂದಿದ್ದರೂ ಸಹ, ಇಲ್ಲಿನ ಚಿತ್ರೋದ್ಯಮದ ಸ್ವಂತಿಕೆ ಮತ್ತು ಅಮೆರಿಕಾ ಹಾಗೂ ಐರೋಪ್ಯ ಚಿತ್ರಗಳು ಅದರ ಮೇಲೆ ಬೀರಿರುವ ಪ್ರಭಾವಗಳ ಕುರಿತು ನಡೆಯುತ್ತಿರುವ ಚರ್ಚೆಗಳು ಇಲ್ಲಿನ ಚಲನಚಿತ್ರೋದ್ಯಮದ ಕುರಿತಾದ ಚಿತ್ರಣವನ್ನು ಕಟ್ಟಿಕೊಡುತ್ತವೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಬ್ರಿಟಿಷ್‌ ಮತ್ತು ಅಮೆರಿಕಾದ ಚಿತ್ರಗಳ ನಡುವಿನ ಬಹಳಷ್ಟು ಚಲನಚಿತ್ರಗಳು ಆಗಿಂದಾಗ್ಗೆ ಸಹ-ನಿರ್ಮಾಣದಲ್ಲಿ ಹೊರಬರುತ್ತಿವೆ ಇಲ್ಲವೇ ನಟರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿವೆ. ಬಹಳಷ್ಟು ಬ್ರಿಟಿಷ್‌ ನಟರು ಹಾಲಿವುಡ್ ಚಿತ್ರಗಳಲ್ಲಿ ಈಗ ನಿಯಮಿತವಾಗಿ ಅಭಿನಯಿಸುತ್ತಿರುವುದು ಇದಕ್ಕೆ ಸಾಕ್ಷಿ. BFI ಟಾಪ್ 100 ಬ್ರಿಟಿಷ್‌ ಫಿಲ್ಮ್ಸ್‌ ಎಂಬ ಜನಮತ ಸಂಗ್ರಹವನ್ನು ಬ್ರಿಟಿಷ್‌ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಡೆಸಿದ್ದು, ಸಾರ್ವಕಾಲಿಕ ಅತ್ಯುತ್ಕೃಷ್ಟ ಬ್ರಿಟಿಷ್ ಚಲನಚಿತ್ರಗಳು ಎಂದು ಜನತೆಯು ಪರಿಗಣಿಸಿರುವ 100 ಚಿತ್ರಗಳ ಶ್ರೇಯಾಂಕ ಪಟ್ಟಿಯನ್ನು ಈ ಸಮೀಕ್ಷೆಯು ನೀಡಿದೆ.

ವಿಲಿಯಂ ಷೇಕ್ಸ್‌ಪಿಯರ್‌ನನ್ನು ಚಿತ್ರಿಸುತ್ತದೆ ಎಂದು ನಂಬಲಾಗಿರುವ ಚಾಂಡೋಸ್ ಭಾವಚಿತ್ರ.

ರಾಬರ್ಟ್‌ ಬರ್ನ್ಸ್‌—ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಕವಿ ಎಂದು ಗುರುತಿಸಲ್ಪಟ್ಟಿದ್ದಾನೆ.

ಯುನೈಟೆಡ್ ಕಿಂಗ್‌ಡಂ, ಐಲ್ ಆಫ್ ಮ್ಯಾನ್ ಕಿರುದ್ವೀಪ ಮತ್ತು ಕಡಲ್ಗಾಲುವೆಯ ದ್ವೀಪಗಳೊಂದಿಗೆ ಸಂಬಂಧಹೊಂದಿರುವ ಸಾಹಿತ್ಯವನ್ನಷ್ಟೇ ಅಲ್ಲದೇ, ಯುನೈಟೆಡ್ ಕಿಂಗ್‌ಡಂ ರೂಪುಗೊಳ್ಳುವುದಕ್ಕೆ ಮುಂಚಿತವಾಗಿ ಇಂಗ್ಲೆಂಡ್, ವೇಲ್ಸ್‌ ಹಾಗೂ ಸ್ಕಾಟ್ಲೆಂಡ್‌ಗಳಿಂದ ಬಂದ ಸಾಹಿತ್ಯವನ್ನೂ ಕೂಡ ಬ್ರಿಟಿಷ್‌ ಸಾಹಿತ್ಯ ಎಂದು ಉಲ್ಲೇಖಿಸಲಾಗುತ್ತದೆ. ಬಹುತೇಕ ಬ್ರಿಟಿಷ್‌ ಸಾಹಿತ್ಯವು ಆಂಗ್ಲ ಭಾಷೆಯಲ್ಲಿದೆ.

ಈಗ ಸ್ಕಾಟ್ಲೆಂಡ್‌ ಎಂದು ಜನಜನಿತವಾಗಿರುವ ಪ್ರದೇಶದಿಂದ ಬಂದ ಅತ್ಯಂತ ಹಳೆಯದೆಂದು ಹೇಳಲಾಗುವ ವೈ ಗೊಡೊಡ್ಡಿನ್ (Y Gododdin) ಕವಿತೆಯನ್ನು ಆರನೇ ಶತಮಾನದ ಅಂತ್ಯದ ವೇಳೆಗೆ ಕಂಬ್ರಿಕ್ ಅಥವಾ ಹಳೆಯ ವೆಲ್ಷ್‌ನಲ್ಲಿ ಸಂಯೋಜಿಸಲಾಗಿದ್ದು, ಅರ್ಥರ‍್ ರಾಜನಿಗೆ ಸಂಬಂಧಿಸಿದ ಆರಂಭಿಕ ಉಲ್ಲೇಖಗಳನ್ನು ಇದು ಒಳಗೊಂಡಿದೆ. ಅರ್ಥರನ ಕಾಲದ ದಂತಕಥೆಯನ್ನು ಬೆಳೆಸುವುದರಲ್ಲಿ ಹಾಗೂ ಬ್ರಿಟಿಷ್‌ ಇತಿಹಾಸದ ಆರಂಭಿಕ ಬೆಳವಣಿಗೆಯಲ್ಲಿ ಮಾನ್‌ಮೌತ್‌ನ ಜಿಯೊಫ್ರೆಯು ಮಹತ್ವದ ಪಾತ್ರವನ್ನು ವಹಿಸಿದ್ದಾನೆ. ವ್ಯಾಪಕವಾಗಿ ಹೇಳುವುದಾದರೆ, ಸಾರ್ವಕಾಲಿಕ ಮಹಾನ್‌ ವೆಲ್ಷ್‌ ಕವಿ ಎಂಬ ಅಭಿದಾನವಕ್ಕೆ ಡಫಿಡ್‌ ಅಪ್ ಗ್ವಿಲಿಮ್‌ ಪಾತ್ರನಾಗಿದ್ದಾನೆ. ಹತ್ತೊಂಬತ್ತನೇ ಶತಮಾನದ ಅಂತ್ಯದವರೆಗೂ ವೇಲ್ಸ್‌ನಲ್ಲಿ ವೆಲ್ಷ್‌ ಭಾಷೆಯದೇ ಪ್ರಾಬಲ್ಯವಿದ್ದುದರಿಂದಾಗಿ ವೆಲ್ಷ್‌ ಸಾಹಿತ್ಯದ ಬಹುತೇಕ ಭಾಗವು ವೆಲ್ಷ್‌ ಭಾಷೆಯಲ್ಲಿಯೇ ರಚಿಸಲ್ಪಟ್ಟಿತು. ಅಷ್ಟೇ ಅಲ್ಲ, ಬಹುತೇಕ ಗದ್ಯಗಳು ಧಾರ್ಮಿಕತೆಯ ಗುಣಲಕ್ಷಣಗಳನ್ನು ಹೊಮ್ಮಿಸುತ್ತಿದ್ದು, ವೆಲ್ಷ್‌-ಭಾಷೆಯ ಮೊತ್ತಮೊದಲ ಕಾದಂಬರಿಕಾರ ಎಂಬ ಅಭಿದಾನವನ್ನು ಹತ್ತೊಂಬತ್ತನೇ ಶತಮಾನದ ಬರಹಗಾರನಾದ ಡೇನಿಯಲ್‌ ಜೋನ್ಸ್‌ಗೆ ನೀಡಲಾಗಿದೆ. ಇಪ್ಪತ್ತನೇ ಶತಮಾನದಲ್ಲಿನ ಕವಿಗಳಾದ, ಆರ್. ಎಸ್. ಥಾಮಸ್ ಮತ್ತು ಡೈಲನ್ ಥಾಮಸ್ ಇಂಗ್ಲಿಷ್-ಭಾಷೆಯಲ್ಲಿನ ತಮ್ಮ ಕವಿತೆಗಳಿಗಾಗಿ ಪ್ರಸಿದ್ಧಿಯನ್ನು ಪಡೆದರೆ, ರಿಚರ್ಡ್‌ ಲೆವೆಲ್ಲಿನ್ ಹಾಗೂ ಮಕ್ಕಳಿಗೆ ಸಂಬಂಧಪಟ್ಟ ಸಾಹಿತ್ಯ ಸೃಷ್ಟಿಸಿದ ರೊಲ್ಡ್‌ ಡಾಹ್ಲ್ರವರುಗಳೂ ಸಹ ಹೆಸರುವಾಸಿಯಾಗಿದ್ದರು. ವೆಲ್ಷ್‌ನಲ್ಲಿನ ಆಧುನಿಕ ಬರಹಗಾರರಲ್ಲಿ ಕೇಟ್‌ ರಾಬರ್ಟ್ಸ್‌ ಸೇರಿದ್ದಾರೆ.

ಇತರ ರಾಷ್ಟ್ರೀಯತೆಗಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಐರ್ಲೆಂಡ್‌ ಅಥವಾ ಕಾಮನ್‌ವೆಲ್ತ್‌ ಒಕ್ಕೂಟದ ದೇಶಗಳಿಂದ ಬಂದ ಲೇಖಕರುಗಳು UKಯಲ್ಲಿ ವಾಸಿಸಿ, ಅಲ್ಲಿಯೇ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಶತಮಾನಗಳ ಮೂಲಕ ಹರಿದು ಬಂದಿರುವ ಅಂಥಾ ಗಣನೀಯ ಉದಾಹರಣೆಗಳಲ್ಲಿ, ಜೋನಾಥನ್ ಸ್ವಿಫ್ಟ್‌, ಆಸ್ಕರ್ ವೈಲ್ಡ್‌, ಬ್ರಾಮ್‌ ಸ್ಟೋಕರ್‍, ಜಾರ್ಜ್‌ ಬರ್ನಾರ್ಡ್‌ ಷಾ, ಜೋಸೆಫ್‌ ಕಾನಾರ್ಡ್‌, ಟಿ. ಎಸ್. ಎಲಿಯಟ್‌ ಮತ್ತು ಎಜ್ರಾ ಪೌಂಡ್‌ರವರುಗಳು ಸೇರಿದ್ದಾರೆ. ಜೊತೆಗೆ, ವಿದೇಶದಲ್ಲಿ ಜನಿಸಿದ ಕಜುವೊ ಇಷಿಗುರೊ ಮತ್ತು ಸರ್ ಸಲ್ಮಾನ್‌ ರಷ್ದಿಯವರಂಥಾ ತೀರಾ ಇತ್ತೀಚಿನ ಬ್ರಿಟಿಷ್‌‌ ಲೇಖಕರುಗಳೂ ಸಹ ಈ ಪಟ್ಟಿಗೆ ಸೇರಿದ್ದಾರೆ.

Больше проверок:  Сбой в соцсетях падение прибыли в нефтехиме одобрен проект обновления тюза

ರಂಗಭೂಮಿಗೆ ಸಂಬಂಧಿಸಿ ಹೇಳುವುದಾದರೆ, ಷೇಕ್ಸ್‌ಪಿಯರ್‌ನ ಸಮಕಾಲೀನರಾದ ಕ್ರಿಸ್ಟೋಫರ‍್ ಮಾರ್ಲೋ ಮತ್ತು ಬೆನ್‌ ಜಾನ್ಸನ್‌ರವರುಗಳು ಗಾಢತೆಯನ್ನು ತಂದುಕೊಟ್ಟರು. ತೀರಾ ಇತ್ತೀಚೆಗೆ, ಅಲನ್‌ ಐಕ್‌ಬೋರ್ನ್‌, ಹೆರಾಲ್ಡ್‌ ಪಿಂಟರ್‌, ಮೈಕೇಲ್‌ ಫ್ರಯಾನ್‌, ಟಾಮ್‌ ಸ್ಟೊಪಾರ್ಡ್‌ ಮತ್ತು ಡೇವಿಡ್‌ ಎಡ್ಗರ್‌ರಂಥಾ ಬರಹಗಾರರು ಅತಿ ಯಥಾರ್ಥತಾವಾದ, ಯಥಾರ್ಥತಾವಾದ ಮತ್ತು ತೀವ್ರಗಾಮಿ ಸಿದ್ಧಾಂತದ ಅಂಶಗಳನ್ನು ತಮ್ಮ ಸಾಹಿತ್ಯದಲ್ಲಿ ಸಂಯೋಜಿಸಿದರು.

ಇಂಗ್ಲಿಷ್ ಭಾಷೆಗೆ ಸಿಕ್ಕಿರುವ ಪ್ರಾಮುಖ್ಯತೆಯಿಂದಾಗಿ UKಯ ಮಾಧ್ಯಮಕ್ಕೆ ಒಂದು ಬಹುವ್ಯಾಪಕವಾದ ಅಂತರರಾಷ್ಟ್ರೀಯ ಆಯಾಮ ದೊರೆತಿದೆ.

BBC ದೂರದರ್ಶನ ಕೇಂದ್ರBBCಯು ವಿಶ್ವದಲ್ಲಿನ ಅತಿದೊಡ್ಡ ಮತ್ತು ಹಳೆಯ ಪ್ರಸಾರಕವಾಗಿದೆ.

Channel 4 ಕಟ್ಟಡ.

UKಯಲ್ಲಿ ಐದು ಪ್ರಮುಖ ರಾಷ್ಟ್ರವ್ಯಾಪಿ ದೂರದರ್ಶನ ವಾಹಿನಿಗಳಿವೆ. ಅವುಗಳೆಂದರೆ: BBC One, BBC Two, ITV, Channel 4 ಮತ್ತು Five. ಇವುಗಳು ಪ್ರಸ್ತುತ ಅನಲೋಗ್ ಟೆರೆಸ್ಟ್ರಿಯಲ್, ಮುಕ್ತ ಪ್ರಸಾರದ ಸಂಕೇತಗಳ ಮೂಲಕ ಬಿತ್ತರವಾಗುತ್ತಿದ್ದು, ಕೊನೆಯ ಮೂರು ವಾಹಿನಿಗಳಿಗೆ ವಾಣಿಜ್ಯ ಜಾಹೀರಾತುಗಳ ಮೂಲಕ ಹಣ ಬರುತ್ತಿದೆ. ವೇಲ್ಸ್‌ನಲ್ಲಿ S4C ಎಂಬ ವೆಲ್ಷ್‌ನ ನಾಲ್ಕನೇ ವಾಹಿನಿಯು Channel 4ನ್ನು ಸ್ಥಾನಪಲ್ಲಟಗೊಳಿಸಿ, ಉಚ್ಛ್ರಾಯ ಸಮಯಗಳಲ್ಲಿ ವೆಲ್ಷ್‌ ಭಾಷೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ. ಇತರ ಸಮಯಗಳಲ್ಲಿ ಈ ವಾಹಿನಿಯು Channel 4ನ ಕಾರ್ಯಕ್ರಮಗಳನ್ನೂ ಬಿತ್ತರಿಸುತ್ತದೆ.

BBCಯು UKಯ ಸಾರ್ವಜನಿಕ ಬಂಡವಾಳದ ರೇಡಿಯೋ, ದೂರದರ್ಶನ ಮತ್ತು ಅಂತರ್ಜಾಲ ಮಾಧ್ಯಮವನ್ನೊಳಗೊಂಡ ಪ್ರಸಾರ ನಿಗಮವಾಗಿದ್ದು, ಇಡೀ ವಿಶ್ವದಲ್ಲೇ ಅತ್ಯಂತ ಹಳೆಯದಾದ ಮತ್ತು ಬೃಹತ್ತಾದ ಪ್ರಸಾರಕನಾಗಿದೆ. ಇದು UK ಮತ್ತು ವಿದೇಶಗಳೆರಡರಲ್ಲೂ ಹಲವಾರು ದೂರದರ್ಶನ ವಾಹಿನಿಗಳು ಮತ್ತು ರೇಡಿಯೋ ಕೇಂದ್ರಗಳನ್ನು ನಡೆಸುತ್ತದೆ. BBCಯ ಅಂತರರಾಷ್ಟ್ರೀಯ ದೂರದರ್ಶನ ಸುದ್ದಿ ಸೇವೆಯಾದ BBC ವರ್ಲ್ಡ್‌ ನ್ಯೂಸ್‌ ವಿಶ್ವಾದ್ಯಂತ ಪ್ರಸಾರವಾಗುತ್ತದೆ ಮತ್ತು BBC ವರ್ಲ್ಡ್‌ ಸರ್ವೀಸ್‌ ರೇಡಿಯೋ ಜಾಲವು ಜಾಗತಿಕವಾಗಿ ಮೂವತ್ತಮೂರು ಭಾಷೆಗಳಲ್ಲಿ ಬಿತ್ತರವಾಗುತ್ತದೆ. ಇಷ್ಟೇ ಅಲ್ಲದೇ BBC ರೇಡಿಯೋ ಸಿಮ್ರು ಮೂಲಕ ವೆಲ್ಷ್‌ ಭಾಷೆಯಲ್ಲಿ ಇದು ಸೇವೆಗಳನ್ನು ಒದಗಿಸುತ್ತದೆ ಮತ್ತು ಸ್ಕಾಟ್ಲೆಂಡ್‌ನಲ್ಲಿನ BBC ರೇಡಿಯೋ nan Gàidheal ಮೂಲಕ ಗೇಲಿಕ್‌ ಭಾಷೆಯಲ್ಲಿ ಹಾಗೂ ಉತ್ತರ ಐರ್ಲೆಂಡ್‌ನಲ್ಲಿ ಐರಿಷ್‌ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ.

BBCಯ ಸ್ವದೇಶೀ ಸೇವೆಗಳಿಗೆ ದೂರದರ್ಶನದ ಪರವಾನಗಿಯಿಂದ ಹಣಕಾಸಿನ ನೆರವು ಒದಗಿ ಬರುತ್ತದೆ. BBC ವರ್ಲ್ಡ್ ಸರ್ವೀಸ್‌ ರೇಡಿಯೋಗೆ ವಿದೇಶಿ ಮತ್ತು ಕಾಮನ್‌ವೆಲ್ತ್‌ ಕಚೇರಿಯಿಂದ ಬಂಡವಾಳವು ಬರುತ್ತದೆ ಮತ್ತು ವಾಣಿಜ್ಯ ಚಂದಾದಾರಿಕೆಯ ಆಧಾರದ ಮೇಲೆ ಕೇಬಲ್‌ ಹಾಗೂ ಉಪಗ್ರಹ ಸೇವೆಗಳ ಮೂಲಕ ದೂರದರ್ಶನ ಕೇಂದ್ರಗಳು BBC ವರ್ಲ್ಡ್‌ವೈಡ್‌ನಿಂದ ನಿರ್ವಹಿಸಲ್ಪಡುತ್ತವೆ. BBCಯ ಈ ವಾಣಿಜ್ಯ ವಿಭಾಗವು ವರ್ಜಿನ್ ಮೀಡಿಯಾದ ಜೊತೆಗೂಡಿ UKTVಯ ಅರ್ಧದಷ್ಟು ಪಾಲನ್ನು ರೂಪಿಸುತ್ತದೆ.

UKಯು ಈಗ ಬೃಹತ್ ಸಂಖ್ಯೆಯಲ್ಲಿ ಡಿಜಿಟಲ್‌ ಟೆರೆಸ್ಟ್ರಿಯಲ್ ವಾಹಿನಿಗಳನ್ನು ಹೊಂದಿದ್ದು, BBCಯಿಂದ ಬಂದ ಇನ್ನೂ ಆರು ವಾಹಿನಿಗಳು, ITVಯಿಂದ ಬಂದ ಐದು ವಾಹಿನಿಗಳು ಮತ್ತು Channel 4ನಿಂದ ಬಂದ ಮೂರು ವಾಹಿನಿಗಳು ಅದರಲ್ಲಿ ಸೇರಿವೆ. ಇವಷ್ಟೇ ಅಲ್ಲದೇ, ಸಂಪೂರ್ಣವಾಗಿ ವೆಲ್ಷ್‌ನಲ್ಲೇ ಇರುವ S4Cಯಿಂದ ಬಂದ ಒಂದು ವಾಹಿನಿಯೂ ಸಹ ಇದರಲ್ಲಿ ಸೇರಿಕೊಂಡು ಇಡೀ ವಾಹಿನಿ ಸಮೂಹವನ್ನು ವೈವಿಧ್ಯಮಯವನ್ನಾಗಿಸಿದೆ.

ಡಿಜಿಟಲ್ ಕೇಬಲ್ ದೂರದರ್ಶನದ ಸೇವೆಗಳ ಅಗಾಧ ಪಾಲನ್ನು ವರ್ಜಿನ್‌ ಮೀಡಿಯಾ ಒದಗಿಸುತ್ತಿದೆ. ಫ್ರೀಸ್ಯಾಟ್‌ನಿಂದ ಅಥವಾ ಬ್ರಿಟಿಷ್‌‌ ಸ್ಕೈ ಬ್ರಾಡ್‌ಕಾಸ್ಟಿಂಗ್‌ನಿಂದ ಲಭ್ಯವಿರುವ ಉಪಗ್ರಹ ದೂರದರ್ಶನದ ನೆರವಿನೊಂದಿಗೆ ಮತ್ತು ಫ್ರೀವ್ಯೂನಿಂದ ಬರುವ ಮುಕ್ತ ಪ್ರಸಾರದ ಡಿಜಿಟಲ್ ಟೆರೆಸ್ಟ್ರಿಯಲ್ ದೂರದರ್ಶನದ ಮೂಲಕ ಈ ಸೇವೆಗಳು ಸಿಗುತ್ತಿವೆ. 2012ರ ವೇಳೆಗೆ ಇಡೀ UKಯು ಡಿಜಿಟಲ್ ಪ್ರಸಾರಕ್ಕೆ ಬದಲಾಯಿಸಿಕೊಳ್ಳಲಿದೆ.

UKಯಲ್ಲಿನ ರೇಡಿಯೋ ವಲಯದ ಮೇಲೆ BBC ರೇಡಿಯೋ ಪ್ರಭುತ್ವ ಸಾಧಿಸಿದ್ದು, ಹತ್ತು ರಾಷ್ಟ್ರೀಯ ಜಾಲಗಳು ಮತ್ತು ನಲವತ್ತಕ್ಕೂ ಹೆಚ್ಚಿನ ಸ್ಥಳೀಯ ರೇಡಿಯೋ ಕೇಂದ್ರಗಳನ್ನು ಅದು ನಡೆಸುತ್ತದೆ. ಕೇಳುಗರ ಸಂಖ್ಯೆಯ ಆಧಾರದ ಮೇಲೆ ಹೇಳುವುದಾದರೆ BBC ರೇಡಿಯೋ 2 ಅತ್ಯಂತ ಜನಪ್ರಿಯ ರೇಡಿಯೋ ಕೇಂದ್ರವಾಗಿದ್ದು, ಇದರ ನಂತರದ ಹತ್ತಿರದ ಸ್ಥಾನವನ್ನು BBC ರೇಡಿಯೋ 1 ಹೊಂದಿದೆ. ಮುಖ್ಯವಾಗಿ ಸ್ಥಳೀಯ ವಾಣಿಜ್ಯ ಉದ್ದೇಶ ಹೊಂದಿದ ರೇಡಿಯೋ ಕೇಂದ್ರಗಳು ದೇಶಾದ್ಯಂತ ನೂರಾರು ಸಂಖ್ಯೆಯಲ್ಲಿದ್ದು, ಸಂಗೀತ ಅಥವಾ ಮಾತುಕತೆಯ ಸ್ವರೂಪದಲ್ಲಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿವೆ.

ವೃತ್ತಪತ್ರಿಕೆಗಳನ್ನು ಬದಿಗಿಟ್ಟು ನೋಡಿದರೆ, ಬ್ರಿಟಿಷ್‌‌ ನಿಯತಕಾಲಿಕಗಳು ಹಾಗೂ ಪ್ರಸಕ್ತ ಘಟನೆಗಳ ಕುರಿತಾದ ಬರಹಗಳನ್ನುಳ್ಳ ಪತ್ರಿಕೆಗಳು ವಿಶ್ವಾದ್ಯಂತ ಉತ್ತಮ ಪ್ರಸರಣವನ್ನು ದಾಖಲಿಸಿದ್ದು ಅವುಗಳಲ್ಲಿ ದಿ ಇಕನಾಮಿಸ್ಟ್ ಹಾಗೂ ನೇಚರ್ ಪತ್ರಿಕೆಗಳು ಸೇರಿವೆ.

ಸ್ಥಳೀಯವಾಗಿರುವ, ಉತ್ತರ ಐರ್ಲೆಂಡ್‌, ಸ್ಕಾಟ್ಲೆಂಡ್‌, ವೇಲ್ಸ್‌ ಹಾಗೂ ಇಂಗ್ಲೆಂಡ್‌ನ ಜಾನಪದ ಸಂಗೀತದಿಂದ ಮೊದಲ್ಗೊಂಡು ವೇಗದ ತಾಳ-ಧ್ವನಿಯ ಸಂಗೀತದವರೆಗಿನ ಸಂಗೀತದ ವಿವಿಧ ಶೈಲಿಗಳು UKಯಲ್ಲಿ ಜನಪ್ರಿಯವಾಗಿವೆ.

ಯುನೈಟೆಡ್‌ ಕಿಂಗ್‌ಡಂ ಮತ್ತು ಅದಕ್ಕಿಂತ ಮುಂಚಿತವಾಗಿದ್ದ ದೇಶಗಳಿಂದ ಬಂದ ಶಾಸ್ತ್ರೀಯ ಸಂಗೀತದ ಸಂಯೋಜಕರಲ್ಲಿ ಗಮನಾರ್ಹವಾದವರೆಂದರೆ, ವಿಲಿಯಂ ಬೈರ್ಡ್‌, ಹೆನ್ರಿ ಪರ್ಸೆಲ್‌, ಸರ್‌ ಎಡ್ವರ್ಡ್‌ ಎಲ್ಗರ್‌, ಗುಸ್ಟವ್‌ ಹೋಸ್ಟ್‌, ಸರ್‌ ಅರ್ಥರ್‌ ಸಲ್ಲಿವನ್‌ (ವಾಗ್ಗೇಯಕಾರ ಸರ್‌ ಡಬ್ಲ್ಯು.ಎಸ್. ಗಿಲ್ಬರ್ಟ್‌ರೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿ ಅತ್ಯಂತ ಹೆಸರುವಾಸಿಯಾಗಿದ್ದವ), ರಾಲ್ಫ್‌ ವಾಘನ್ ವಿಲಿಯಮ್ಸ್‌ ಮತ್ತು ಆಧುನಿಕ ಬ್ರಿಟಿಷ್‌ ರೂಪಕಬೆಂಜಮಿನ್ ಬ್ರಿಟ್ಟನ್ಇವರೇ ಮೊದಲಾದವರು. ಈಗ ಬದುಕಿರುವ ಪ್ರಸಿದ್ಧ ಸಂಯೋಜಕರಲ್ಲಿ ಸರ್ ಪೀಟರ್ ಮ್ಯಾಕ್ಸ್‌ವೆಲ್‌ ಡೇವಿಸ್‌ ಒಬ್ಬರಾಗಿದ್ದು, ಕ್ವೀನ್ಸ್‌ ಮ್ಯೂಸಿಕ್‌ನ ಈಗಿನ ಒಡೆಯರಾಗಿದ್ದಾರೆ. BBC ಸಿಂಫನಿ ಆರ್ಕೇಸ್ಟ್ರ ಮತ್ತು ಲಂಡನ್‌ ಸಿಂಫನಿ ಕೋರಸ್‌ನಂತಹ ಜಗತ್‌ ಪ್ರಸಿದ್ಧ ಸ್ವರಮೇಳದ‌ ವಾದ್ಯವೃಂದಗಳು ಹಾಗೂ ಮೇಳಗಾಯನಗಳಿಗೂ ಸಹ UKಯು ನೆಲೆಯಾಗಿದೆ. ಗಮನ ಸೆಳೆಯುವ ವಾದ್ಯವೃಂದ ನಿರ್ವಾಹಕರಲ್ಲಿ ಸರ್ ಸೈಮನ್‌ ರ್ಯಾಟಲ್, ಜಾನ್‌ ಬಾರ್ಬಿರೋಲಿ ಮತ್ತು ಸರ್ ಮಾಲ್ಕಮ್ ಸಾರ್ಜೆಂಟ್‌ ಸೇರಿದ್ದಾರೆ. ಚಲನಚಿತ್ರ ಸಂಗೀತ ಸಂಯೋಜಕರಲ್ಲಿ ಗಮನಾರ್ಹವಾದವರೆಂದರೆ, ಜಾನ್‌ ಬ್ಯಾರಿ, ಕ್ಲಿಂಟ್‌ ಮ್ಯಾನ್‌ಸೆಲ್‌, ಮೈಕ್‌ ಓಲ್ಡ್‌ಫೀಲ್ಡ್‌, ಜಾನ್‌ ಪೊವೆಲ್‌, ಕ್ರೆಗ್‌ ಆರ್ಮ್‌ಸ್ಟ್ರಾಂಗ್‌, ಡೇವಿಡ್‌ ಅರ್ನಾಲ್ಡ್‌, ಜಾನ್‌ ಮರ್ಫಿ, ಮೊಂಟಿ ನಾರ್ಮನ್‌ ಮತ್ತು ಹ್ಯಾರಿ ಗ್ರೆಗ್ಸನ್‌ ವಿಲಿಯಮ್ಸ್‌. ಜಾರ್ಜ್‌ ಫ್ರೆಡ್‌ರಿಕ್‌ ಹ್ಯಾಂಡೆಲ್‌ ಹುಟ್ಟಿನಿಂದ ಜರ್ಮನ್‌ ಆಗಿದ್ದರೂ ಸಹ ಬ್ರಿಟಿಷ್‌‌ ಆಗಿ ಮರಣಹೊಂದಿದ (ಆ ಕಾಲದಲ್ಲಿದ್ದ ರಾಜರುಗಳ ರೀತಿಯಲ್ಲಿ) ಎಂದು ಪರಿಗಣಿಸಲಾಗಿದೆ. ಮೆಸಿಯಾ (Messiah) ಕೃತಿಯಂತೆಯೇ ಅವನ ಅತ್ಯುತ್ತಮ ಕೃತಿಗಳಲ್ಲಿ ಕೆಲವೊಂದು ಬ್ರಿಟಿಷ್‌ ಜನರಿಗೆಂದೇ ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲ್ಪಟ್ಟಿರುವುದೇ ಇದಕ್ಕೆ ಕಾರಣ.

Больше проверок:  Как узнать прошла ли ваша декларация камеральную проверку

ಜ್ಞಾನದ ತತ್ವಚಿಂತನೆಯ ಒಂದು ಶಾಖೆಯಾಗಿರುವ "ಬ್ರಿಟಿಷ್‌‌ ಅನುಭವೈಕ್ಯವಾದ" ಸಂಪ್ರದಾಯಕ್ಕಾಗಿ ಯುನೈಟೆಡ್‌ ಕಿಂಗ್‌ಡಂ ಹೆಸರುವಾಸಿಯಾಗಿದೆ. ಅನುಭವದಿಂದ ಪರೀಕ್ಷಿಸಲ್ಪಟ್ಟು ಪ್ರಮಾಣಿತಗೊಂಡ ಜ್ಞಾನ ಮಾತ್ರವೇ ಕ್ರಮಬದ್ಧವಾದುದು ಅಥವಾ ಸಿಂಧುವಾದುದು ಎಂದು ಈ ತತ್ವವು ಹೇಳುತ್ತದೆ. ಜೊತೆಗೆ, "ವ್ಯವಹಾರ ಜ್ಞಾನದ ಸ್ಕಾಟಿಷ್‌ ಶಾಲೆ‌" ಎಂದು ಕೆಲವೊಮ್ಮೆ ಉಲ್ಲೇಖಿಸಲ್ಪಡುವ ಸ್ಕಾಟಿಷ್‌ ತತ್ವಚಿಂತನೆಗೂ ಯುನೈಟೆಡ್‌ ಕಿಂಗ್‌ಡಂ ಹೆಸರುವಾಸಿಯಾಗಿದೆ. ಬ್ರಿಟಿಷ್‌‌ ಅನುಭವೈಕ್ಯವಾದದ ಅತ್ಯಂತ ಪ್ರಸಿದ್ಧ ತತ್ವಚಿಂತಕರಲ್ಲಿ, ಜಾನ್‌ ಲೋಕ್‌, ಜಾರ್ಜ್‌ ಬರ್ಕ್‌ಲಿ ಮತ್ತು ಡೇವಿಡ್‌ ಹ್ಯೂಮ್‌ (ಈತ ಸ್ವತಃ ಓರ್ವ ಸ್ಕಾಟಿಷ್‌ ಆಗಿದ್ದ) ಮೊದಲಾದವರು ಸೇರಿದ್ದರೆ, ಡುಗಾಲ್ಡ್‌ ಸ್ಟೀವರ್ಟ್‌, ಥಾಮಸ್‌ ರೀಡ್‌ ಮತ್ತು ವಿಲಿಯಂ ಹ್ಯಾಮಿಲ್ಟನ್‌ ಇವರೇ ಮೊದಲಾದವರು ಸ್ಕಾಟಿಷ್‌ "ಕಾಮನ್‌ ಸೆನ್ಸ್‌" ಸ್ಕೂಲ್‌ನ ಪ್ರಮುಖ ಪ್ರತಿಪಾದಕರಾಗಿದ್ದರು. ಪ್ರಯೋಜನ ತತ್ವ ಎಂಬ ನೈತಿಕ ತತ್ವಚಿಂತನೆಯ ಸಿದ್ಧಾಂತಕ್ಕಾಗಿಯೂ ಬ್ರಿಟನ್‌ ಗಮನ ಸೆಳೆಯುತ್ತದೆ. ಈ ಸಿದ್ಧಾಂತವನ್ನು ಜೆರೆಮಿ ಬೆಂಥಾಮ್‌ ಮೊದಲು ಬಳಕೆಗೆ ತಂದಿದ್ದು, ನಂತರ ಜಾನ್‌ ಸ್ಟುವರ್ಟ್‌ ಮಿಲ್‌ ಎಂಬಾತನು ಇದನ್ನು ಯುಟಿಲಿಟೇರಿಯನಿಸಂ ಎಂಬ ತನ್ನ ಪುಟ್ಟ ಕೃತಿಯಲ್ಲಿ ಬಳಸಿಕೊಂಡಿದ್ದಾನೆ.

UK ಮತ್ತು ಅದಕ್ಕಿಂತ ಮುಂಚಿತವಾಗಿದ್ದ ಸಂಸ್ಥಾನಗಳಿಂದ ಬಂದ ಇತರ ಶ್ರೇಷ್ಠ ತತ್ವಚಿಂತಕರಲ್ಲಿ ಡನ್ಸ್‌ ಸ್ಕೋಟಸ್‌, ಜಾನ್‌ ಲಿಲ್‌ಬರ್ನೆ, ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್‌, ಒಕ್‌ಹ್ಯಾಮ್‌ನ ವಿಲಿಯಂ, ಥಾಮಸ್‌ ಹೋಬ್ಸ್‌, ಬರ್ಟ್ರೆಂಡ್‌ ರಸ್ಸೆಲ್‌, ಆಡಮ್‌ ಸ್ಮಿತ್‌ ಮತ್ತು ಆಲ್ಫ್ರೆಡ್‌ ಎಯರ್ ಮೊದಲಾದವರು ಸೇರಿದ್ದಾರೆ. ವಿದೇಶದಲ್ಲಿ ಜನಿಸಿದವರಾಗಿದ್ದು, UKಯಲ್ಲಿ ನೆಲೆಗೊಂಡ ತತ್ವಚಿಂತಕರಲ್ಲಿ ಇಸಾಯ ಬರ್ಲಿನ್‌, ಕಾರ್ಲ್‌ ಮಾರ್ಕ್ಸ್‌‌, ಕಾರ್ಲ್‌ ಪೊಪರ್ ಮತ್ತು ಲುಡ್‌ವಿಗ್‌ ವಿಟ್‌ಜೆನ್‌ಸ್ಟೀನ್‌ ಸೇರಿದ್ದಾರೆ.

ವಿಜ್ಞಾನ, ಶಿಲ್ಪಶಾಸ್ತ್ರ ಮತ್ತು ನಾವೀನ್ಯತೆ

ಸರ್ ಐಸಾಕ್ ನ್ಯೂಟನ್

ಯುನೈಟೆಡ್‌ ಕಿಂಗ್‌ಡಂ ಮತ್ತು ಅದಕ್ಕಿಂತ ಮುಂಚಿತವಾಗಿದ್ದ ದೇಶಗಳು, ವಿಜ್ಞಾನಿಗಳು ಮತ್ತು ಶಿಲ್ಪಿಗಳನ್ನು ರೂಪಿಸಿದ್ದು, ಪ್ರಮುಖ ಮಂಡನೆಗಳನ್ನು ತಮ್ಮದಾಗಿಸಿಕೊಂಡ ಕೀರ್ತಿಯನ್ನು ಅವರು ಹೊಂದಿದ್ದಾರೆ. ಅವುಗಳೆಂದರೆ:

ಇಸಂಬರ್ದ್‌ ಕಿಂಗ್‌ಡಂ ಬ್ರುನೆಲ್‌ರಂಥ ಪಥನಿರ್ಮಾಪಕರನ್ನು ಒಳಗೊಂಡು ರೂಪಿಸಲ್ಪಟ್ಟ ಗಮನಾರ್ಹ ಸಿವಿಲ್‌ ಎಂಜಿನಿಯರಿಂಗ್ ಯೋಜನೆಗಳು ವಿಶ್ವದ ಮೊದಲ ರಾಷ್ಟ್ರೀಯ ರೈಲ್ವೆ ಸಾಗಾಣಿಕಾ ವ್ಯವಸ್ಥೆಗೆ ತಮ್ಮದೇ ಆದ ಕಾಣಿಕೆಯನ್ನು ನೀಡಿವೆ. UKಯಲ್ಲಿ ಪಥನಿರ್ಮಾಣವಾದ ಇತರ ಮಂಡನೆಗಳು ಅಥವಾ ಆವಿಷ್ಕಾರಗಳಲ್ಲಿ ಇವುಗಳು ಸೇರಿವೆ: ನೌಕಾ ಕಾಲಮಾಪಕ, ಜೆಟ್‌ ಎಂಜಿನ್‌, ಆಧುನಿಕ ಬೈಸಿಕಲ್‌, ವಿದ್ಯುತ್ ದೀಪವ್ಯವಸ್ಥೆ, ಆವಿಯ ನೀರ್ಗಾಲಿ, ಸ್ಟೀರಿಯೋ ಧ್ವನಿ, ಚಲನಚಿತ್ರ, ತಿರುಪು ಚಾಲಕ, ಆಂತರಿಕ ದಹನದ ಎಂಜಿನ್‌, ಸೇನಾ ರೇಡಾರ್‌, ವಿದ್ಯುನ್ಮಾನ ಗಣಕಯಂತ್ರ, ವೈಮಾನಿಕ ವಿಜ್ಞಾನ‌, ಸೋಡಾ ನೀರು, ಶುಶ್ರೂಷೆ, ಕೀವುನಾಶಕ ಶಸ್ತ್ರಚಿಕಿತ್ಸೆ, ಚುಚ್ಚುಮದ್ದು ಹಾಕುವಿಕೆ‌ ಮತ್ತು ಪ್ರತಿಜೀವಕ‌ಗಳು.‌

ರಾಯಲ್ ಅಕೆಡೆಮಿಯು ಲಂಡನ್‌ನಲ್ಲಿ ನೆಲೆಗೊಂಡಿದೆ. ಕಲೆಗೆ ಸಂಬಂಧಪಟ್ಟ ಇತರ ಪ್ರಮುಖ ಶಾಲೆಗಳಲ್ಲಿ ಇವುಗಳು ಸೇರಿವೆ: ಸ್ಲೇಡ್‌ ಸ್ಕೂಲ್‌ ಆಫ್ ಫೈನ್‌ ಆರ್ಟ್‌; ಸೆಂಟ್ರಲ್ ಸೇಂಟ್‌ ಮಾರ್ಟಿನ್ಸ್‌ ಸ್ಕೂಲ್ ಆಫ್ ಆರ್ಟ್‌ ಅಂಡ್‌ ಡಿಸೈನ್‌ ಹಾಗೂ ಚೆಲ್ಸಿಯಾ ಕಾಲೇಜ್‌ ಆಫ್‌ ಆರ್ಟ್‌ ಅಂಡ್‌ ಡಿಸೈನ್‌ ಇವುಗಳನ್ನು ಒಳಗೊಂಡಿರುವ ಸಿಕ್ಸ್‌-ಸ್ಕೂಲ್‌ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ ಲಂಡನ್‌; ಗ್ಲಾಸ್ಗೋ ಸ್ಕೂಲ್ ಆಫ್ ಆರ್ಟ್‌ ಮತ್ತು ಲಂಡನ್‌ ವಿಶ್ವವಿದ್ಯಾಲಯದ ಗೋಲ್ಡ್‌ಸ್ಮಿತ್ಸ್‌. ಈ ವಾಣಿಜ್ಯೋದ್ದೇಶದ ಸಾಹಸೋದ್ಯಮವು ಬ್ರಿಟನ್ನಿನ ಅಗ್ರಗಣ್ಯ ದೃಷ್ಟಿಗೋಚರ ಕಲೆಗಳ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಮುಖ ಬ್ರಿಟಿಷ್‌‌ ಕಲಾವಿದರುಗಳಲ್ಲಿ ಈ ಕೆಳಕಂಡವರು ಸೇರಿದ್ದಾರೆ: ಸರ್‌ ಜೊಶುವಾ ರೆನಾಲ್ಡ್ಸ್‌, ಥಾಮಸ್ ಗೇನ್ಸ್‌ಬರೋ, ಜಾನ್ ಕಾನ್‌ಸ್ಟೇಬಲ್‌, ವಿಲಿಯಂ ಬ್ಲೇಕ್, ಜೆ. ಎಂ. ಡಬ್ಲ್ಯು. ಟರ್ನರ್, ವಿಲಿಯಂ ಮೋರಿಸ್, ಎಲ್. ಎಸ್. ಲೌರಿ, ಫ್ರಾನ್ಸಿಸ್‌ ಬೇಕನ್, ಲೂಸಿಯನ್ ಫ್ರೆಡ್, ಡೇವಿಡ್ ಹಾಕ್ನೆ, ಗಿಲ್ಬರ್ಟ್‌ ಮತ್ತು ಜಾರ್ಜ್‌, ರಿಚರ್ಡ್‌ ಹ್ಯಾಮಿಲ್ಟನ್, ಪೀಟರ್ ಬ್ಲೇಕ್, ಹೋವರ್ಡ್‌ ಹಾಡ್‌ಕಿನ್, ಆಂಟೊನಿ ಗಾರ್ಮ್ಲೆ ಮತ್ತು ಅನೀಶ್ ಕಪೂರ್. 1980ರ ಮತ್ತು 1990ರ ದಶಕದ ಅಂತ್ಯದ ವೇಳೆಗೆ, ಲಂಡನ್‌ನಲ್ಲಿನ ಸಾಚಿ ಗ್ಯಾಲರಿಯು ಬಹುಪ್ರಕಾರದ ಕಲಾವಿದರ ಗುಂಪೊಂದನ್ನು ಸಾರ್ವಜನಿಕರ ಗಮನಕ್ಕೆ ತಂದಿತು. ಅವರೇ ಮುಂದೆ ಯುವ ಬ್ರಿಟಿಷ್‌ ಕಲಾವಿದರು ಎಂದು ಹೆಸರಾದರು. ಸಡಿಲವಾಗಿ ರೂಪುಗೊಂಡಿದ್ದ ಈ ಆಂದೋಲನದಲ್ಲಿದ್ದ ಜನಪ್ರಿಯ ಸದಸ್ಯರೆಂದರೆ, ಡೇಮಿಯನ್ ಹಿರ್ಸ್‌, ಕ್ರಿಸ್ ಒಫಿಲಿ, ರಾಚೆಲ್ ಡೈಟ್‌ರೀಡ್‌, ಟ್ರೇಸಿ ಎಮಿನ್, ಮಾರ್ಕ್‌ ವ್ಯಾಲಿಂಜರ್, ಸ್ಟೀವ್ ಮೆಕ್‌ಕ್ವೀನ್, ಸ್ಯಾಮ್ ಟೇಲರ್-ವುಡ್, ಮತ್ತು ಚಾಪ್‌ಮನ್‌ ಸೋದರರು.

ಪ್ಲಿಮೌಥ್‌ನಲ್ಲಿ ಬ್ರಿಟಾನಿಯ ವಿಗ್ರಹ ಬ್ರಿಟಾನಿಯ UKಯ ರಾಷ್ಟ್ರೀಯ ವ್ಯಕ್ತಿರೂಪ

ಯುನೈಟೆಡ್‌ ಕಿಂಗ್‌ಡಂನ ವ್ಯಾಪ್ತಿಯೊಳಗೆ

ಇಂಗ್ಲೆಂಡ್ ಸಂತ ಜಾರ್ಜ್‌ ಪಂಚದಳದ ಗುಲಾಬಿ

ವೇಲ್ಸ್‌ ಸಂತ ಡೇವಿಡ್ ಈರುಳ್ಳಿ ಜಾತಿಯ ಹೂವು/ನೆಲನೈದಿಲೆ

ಉತ್ತರ ಐರ್ಲೆಂಡ್‌‌ ಸಂತ ಪ್ಯಾಟ್ರಿಕ್ ಸೀಮೆ ಅಗಸೆ ಹೂವು/ತ್ರಿದಳಪರ್ಣಿ

ಉತ್ತರ ಐರ್ಲೆಂಡ್‌ನ 1973ರ ಸಂವಿಧಾನ ಕಾಯಿದೆಯ ಅನುಸಾರವಾಗಿ ಅಧಿಕೃತವಾದ, ಉತ್ತರ ಐರ್ಲೆಂಡಿನ ರಾಷ್ಟ್ರೀಯ ಧ್ವಜವಾಗಲೀ ಅಥವಾ ವಿಶ್ವವ್ಯಾಪಕವಾಗಿ ಬೆಂಬಲಿಸಲ್ಪಟ್ಟ ಯಾವುದೇ ಅನಧಿಕೃತ ಧ್ವಜವಾಗಲೀ ಉತ್ರರ ಐರ್ಲೆಂಡ್‌ನಲ್ಲಿ ಇಲ್ಲ. ಉತ್ತರ ಐರ್ಲೆಂಡ್‌ನಲ್ಲಿ ಕಂಡುಬರುವ ವಿವಿಧ ಧ್ವಜಗಳ ಬಳಕೆಯು ವಿವಾದಾಸ್ಪದ ವಿಷಯವಾಗಿದೆ. ಆದಾಗ್ಯೂ, ಸಡಿಲವಾದ ಉದ್ದನೆಯ ಧ್ವಜಪಟವನ್ನು ಕ್ರೀಡಾ ಕಾರ್ಯಕ್ರಮಗಳಲ್ಲಿ ಆಗಾಗ ಬಳಸಲಾಗುತ್ತದೆ. ಉತ್ತರ ಐರ್ಲೆಂಡ್‌ನ ಧ್ವಜಗಳ ವಿವಾದ ಮತ್ತು ಒಕ್ಕೂಟದ ಧ್ವಜಗಳು ಹಾಗೂ ಯುನೈಟೆಡ್‌ ಕಿಂಗ್‌ಡಂನ ಧ್ವಜಗಳು Archived 2008-05-21 at the UK Government Web Archive ಇವುಗಳನ್ನು ನೋಡಿರಿ.

Definitions and translations from Wiktionary

Media from Commons

Learning resources from Wikiversity

Quotations from Wikiquote

Source texts from Wikisource

Textbooks from Wikibooks